ಬಸವಣ್ಣ   
  ವಚನ - 103     
 
ಭಕ್ತರ ಕಂಡರೆ ಬೋಳರಪ್ಪಿರಯ್ಯಾ; ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ; ಹಾರುವರ ಕಂಡರೆ ಹರಿನಾಮವೆಂಬಿರಯ್ಯಾ; ಅವರವರ ಕಂಡಡೆ ಅವರವರಂತೆ! ಸೂಳೆಗೆ ಹುಟ್ಟಿದವರ ತೋರದಿರಯ್ಯಾ. ಕೂಡಲಸಂಗಮದೇವನ ಪೂಜಿಸಿ, ಅನ್ಯದೈವಂಗಳಿಗೆರಗಿ ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ?
Hindi Translation भक्तों को देख सिर मुडाते हो; श्रमणों को देख नग्न होते हो; ब्राम्हणों को देख हरिनाम लेते हो-; जिसे जैसे देखते हो वैसे बनते हो स्वामी ऐसे वेश्या जातों को मुझे मत दिखाओ; कूडलसंगमदेव को पूजते हुए अन्य देवों को प्रणामकर भक्त कहलानेवाले अज्ञानीयों को मैं क्या कहूँ ॥ Translated by: Banakara K Gowdappa