ಬಸವಣ್ಣ   
  ವಚನ - 106     
 
ಅಂಗದಿಚ್ಛೆಗೆ ಮದ್ಯಮಾಂಸವ ತಿಂಬರು; ಕಂಗಳಿಚ್ಛೆಗೆ ಪರವಧುವ ನೆರೆವರು: ಲಿಂಗಲಾಂಛನಧಾರಿಯಾದಲ್ಲಿ ಫಲವೇನು? ಲಿಂಗಪಥವ ತಪ್ಪಿ ನಡೆವವರು ಜಂಗಮಮುಖದಿಂದ ನಿಂದೆ ಬಂದರೆ ಕೊಂಡ ಮಾರಿಂಗೆ ಹೋಹುದು ತಪ್ಪದು, ಕೂಡಲಸಂಗಮದೇವಾ!
Hindi Translation कायलिप्सा से माँस मदिरा के सेवन करते हैं; नेत्र लिप्सा से परस्त्रीगमन करते हैं- लिंग पथ से भटक जानेवाले लिंग लांछनधारी हो, तो क्या लाभ? जंगम मुख से निंदा शब्द निकले, तो अधःपतन से बचाव नहीं कूडलसंगमदेव ॥ Translated by: Banakara K Gowdappa