Index   ವಚನ - 2    Search  
 
ಭಕ್ತಸ್ಥಲ ಪೃಥ್ವಿಯಂತೆಂದಲ್ಲಿ, ಮಾಹೇಶ್ವರಸ್ಥಲ ಅಪ್ಪುವಿನಂತೆಂದಲ್ಲಿ, ಪ್ರಸಾದಿಸ್ಥಲ ಅಗ್ನಿಯಂತೆಂದಲ್ಲಿ, ಪ್ರಾಣಲಿಂಗಿಸ್ಥಲ ವಾಯುವಿನಂತೆಂದಲ್ಲಿ, ಶರಣಸ್ಥಲ ಆಕಾಶ ಆವರಣದಂತೆಂದಲ್ಲಿ, ಐಕ್ಯಸ್ಥಲ ಮಹದಾಕಾಶದ ಮಹಾಬೆಳಗಿನ ಕಳೆಯ ಒಳಕೊಂಡಿಪ್ಪುದೆಂದಲ್ಲಿ- ಇಂತೀ ಷಟ್ಸ್ಥಲಕ್ಕೆ ಒಂದ ನೆಮ್ಮಿ ಒಂದನತಿಗಳೆದೆಹೆನೆಂದಡೆ, ಸಂಶಯಕ್ಕೆ ಸಂಬಂಧ, ಅದು ಸದ್ಯೋಜಾತಲಿಂಗಕ್ಕೆ ಅಸಂಬಂಧವಾಗಿಹುದು.