Index   ವಚನ - 3    Search  
 
ಭಕ್ತಸ್ಥಲ ಘಟರೂಪ, ಮಾಹೇಶ್ವರಸ್ಥಲ ಆತ್ಮರೂಪ, ಪ್ರಸಾದಿಸ್ಥಲ ಜ್ಞಾನರೂಪ, ಇಂತೀ ತ್ರಿವಿಧಸ್ಥಲ ಭಕ್ತಿರೂಪ. ಪ್ರಾಣಲಿಂಗಿಸ್ಥಲ ಜ್ಞಾತೃರೂಪ, ಶರಣಸ್ಥಲ ಜ್ಞೇಯರೂಪ, ಐಕ್ಯಸ್ಥಲ ಸರ್ವಮಯಜ್ಞಾನರೂಪ. ಇಂತೀ ತ್ರಿವಿಧಸ್ಥಲ ಏಕವಾಗಿ ನಿಂದುದು ಕರ್ತೃಸ್ವರೂಪ. ಇಂತೀ ಷಟ್ಸ್ಥಲ ಉಭಯವಾಗಿ ಕಾಯದಲ್ಲಿ ಆತ್ಮ ಘಟಿಸಿಪ್ಪಂತೆ, ಆತ್ಮನ ಚೇತನದಿಂದ ಘಟ ಅನುಭವಿಸುವಂತೆ, ಇಂತೀ ದ್ವಂದ್ವವೊಂದಾಗಿ ನಿಂದರಿದಲ್ಲಿ ಷಟ್ಸ್ಥಲ ಆರೋಪ ಸದ್ಯೋಜಾತಲಿಂಗಕ್ಕೆ.