Index   ವಚನ - 8    Search  
 
ಸ್ವಯದಿಂದ ಪ್ರಕಾಶ, ಪ್ರಕಾಶದಿಂದ ಲಿಂಗ, ಲಿಂಗದಿಂದ ಶಿಷ್ಯ, ಶಿಷ್ಯನಿಂದ ಗುರು, ಗುರುವಿನಿಂದ ಗುರುತ್ವ, ಗುರುತ್ವದಿಂದ ಸಕಲವೈಭವಂಗಳ ಸುಖ. ಈ ಗುಣ ಅವರೋಹಾರೋಹಾಗಿ ಬಂದು, ಆ ವಸ್ತು ವಸ್ತುಕವಾಗಿ ಬಂದುದನರಿದು, ಪಿಂಡಜ್ಞಾನಸ್ಥಲವ ಕಂಡು, ರತ್ನ ರತ್ನ ಕೂಡಿದಂತೆ, ರತಿ ರತಿ ಬೆರಸಿದಂತೆ, ಸುಖ ಸುಖವನಾಧರಿಸಿದಂತೆ, ಬೆಳಗು ಬೆಳಗಿಂಗೆ ಇದಿರಿಟ್ಟಂತೆ, ಅಂಡ ಪಿಂಡ ಜ್ಞಾನ ತ್ರಿವಿಧ ನೀನಲಾ, ಸದ್ಯೋಜಾತಲಿಂಗದ ಲೀಲಾಭಾವ.