ಗುರುವಿಂಗೆ ಲಿಂಗ ಬಂದು ಗುರುವಾದುದನರಿದು
ಮತ್ತರಿಯದೆ ಕೊಟ್ಟನಲ್ಲಾ, ಶಿಷ್ಯನೆಂದು ಆ ಲಿಂಗವ.
ಗುರುವಾರೆಂಬುದನರಿಯದ ನಾ,
ಶಿಷ್ಯನೆಂದು ಕಟ್ಟಿದೆನಲ್ಲಾ ಆ ಲಿಂಗವ.
ಆವ ಬೀಜವ ಬಿತ್ತಿದಡೂ ಆ ಬೀಜವಪ್ಪುದಲ್ಲದೆ ಬೇರೊಂದಪ್ಪುದೆ?
ಜ್ಯೋತಿ ಜ್ಯೋತಿಯ ಮುಟ್ಟಿದಂತೆ ಇದಿರೆಡೆಯಿಲ್ಲದೆ
ಗುರುಕರಜಾತನ ಮಾಡಬೇಕು.
ನಾನು ಕರ್ತು, ಅವನು ಭೃತ್ಯನೆಂದಲ್ಲಿ ಗುರುವಾದನಲ್ಲದೆ,
ಅಘಹರ ಶ್ರೀಗುರುವಾದುದಿಲ್ಲ.
ಜ್ಞಾನದೀಕ್ಷೆ ಸಂಬಂಧ ಸದ್ಯೋಜಾತಲಿಂಗಕ್ಕೆ.