ಪರುಷ ಲೋಹವ ಸೋಂಕಿದಲ್ಲಿ,
ಆ ಗುಣವಳಿದು, ಹೇಮವಾಯಿತ್ತಲ್ಲದೆ,
ಪುನರಪಿ ಶುದ್ಧಾತ್ಮವಾದುದಿಲ್ಲ.
ಗುರು ಲಿಂಗವೆಂದು ಕೊಟ್ಟಡೆ
ಅಂಗದಲ್ಲಿ ಬಂಧವಾಯಿತ್ತಲ್ಲದೆ,
ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ.
ಇಂತಿದು ಕಾರಣದಲ್ಲಿ,
ಕೆಂಡದ ಮೇಲೆ ಕಟ್ಟಿಗೆಯ
ಹಾಕಿದಡೆ ಪೊತ್ತುವುದಲ್ಲದೆ,
ನಂದಿದ ಪ್ರಕಾಶಕ್ಕೆ ಅರಳೆಯ
ತಂದಿರಿಸಿದಡೆ ಹೊತ್ತಿದುದುಂಟೆ?
ಇದು ಕಾರಣ,
ಸಂಸಾರಪಾಶದಲ್ಲಿ ಬಿದ್ದ ಗುರು
ಶಿಷ್ಯನ ಈಶಣತ್ರಯವ ಬಿಡಿಸಬಲ್ಲನೆ?
ಇಂತೀ ಗುರುಸ್ಥಲನಿರ್ವಾಹಸಂಪಾದನೆ,
ಸದ್ಯೋಜಾತಲಿಂಗಕ್ಕೆ.
Art
Manuscript
Music
Courtesy:
Transliteration
Paruṣa lōhava sōṅkidalli,
ā guṇavaḷidu, hēmavāyittallade,
punarapi śud'dhātmavādudilla.
Guru liṅgavendu koṭṭaḍe
aṅgadalli bandhavāyittallade,
sarvāṅga ātmanalli līyavādudilla.
Intidu kāraṇadalli,
keṇḍada mēle kaṭṭigeya
hākidaḍe pottuvudallade,
nandida prakāśakke araḷeya
tandirisidaḍe hottiduduṇṭe?
Idu kāraṇa,
sansārapāśadalli bidda guru
śiṣyana īśaṇatrayava biḍisaballane?
Intī gurusthalanirvāhasampādane,
sadyōjātaliṅgakke.