ತಡೆ ದಾಡಾಬಂಧನಗಳಿಂದ ಹೋಗ[ದ],
ಹಲುದಾಗದ ಸರ್ಪನಂತೆ,
ಕ್ರಿಯಾಧರ್ಮಂಗಳಲ್ಲಿ ಆವರ್ಚಿಸಿ ಕಟ್ಟಿಗೆ
ತಪ್ಪದಿಪ್ಪುದು ಸದ್ಭಕ್ತಿಸ್ಥಲ.
ಆ ಭಕ್ತನ ಹೃತ್ಕಮಲಮಧ್ಯದಲ್ಲಿ ನಿಂದು,
ತ್ರಿವಿಧ ಮಲತ್ರಯವ ನಿವಾರಿಸಿ,
ಆಗು ಚೇಗೆಯ ಮರೆದು,
ವಂದನೆ ನಿಂದೆಗೆ ಮೈಗೊಡದೆ,
ಕುಸುಮ-ಗಂಧದಂತೆ, ರ[ವಿ]-ಶಿಲೆಯಂತೆ,
ಸವಿ-ಸಾರದಂತೆ
ತಲೆದೋರದೆ ನಿಂದುದು ವಿರಕ್ತವೇಷ.
ಅದು ಕಾಯ-ಜೀವದಂತೆ,
ಜ್ಞಾತೃ-ಜ್ಞೇಯಭೇದದಂತೆ,
ಪೂಜಕ-ಪೂಜೆಗೈತ ಉಭಯದ ಭೇದ ಐಕ್ಯ,
ಸದ್ಯೋಜಾತಲಿಂಗದಲ್ಲಿ.
Art
Manuscript
Music
Courtesy:
Transliteration
Taḍe dāḍābandhanagaḷinda hōga[da],
haludāgada sarpanante,
kriyādharmaṅgaḷalli āvarcisi kaṭṭige
tappadippudu sadbhaktisthala.
Ā bhaktana hr̥tkamalamadhyadalli nindu,
trividha malatrayava nivārisi,
āgu cēgeya maredu,
vandane nindege maigoḍade,
kusuma-gandhadante, ra[vi]-śileyante,
savi-sāradante
taledōrade nindudu viraktavēṣa.
Adu kāya-jīvadante,
jñātr̥-jñēyabhēdadante,
pūjaka-pūjegaita ubhayada bhēda aikya,
sadyōjātaliṅgadalli.