Index   ವಚನ - 22    Search  
 
ಪರುಷರಸ ಲೋಹವ ವೇಧಿಸಬಲ್ಲುದಲ್ಲದೆ ಹೇಮವ ವೇಧಿಸಬಲ್ಲುದೆ? ಅದು ಲೋಹಕ್ಕೆ ಅರಸಲ್ಲದೆ ಹೇಮಕ್ಕೆ ಅರಸಲ್ಲ. ಇಂತೀ ಉಭಯಸ್ಥಲ. ಅಂಗ ಲಿಂಗವಾಗಬಲ್ಲಡೆ, ಲಿಂಗ ಅಂಗವ ಗ್ರಹಿಸಬಲ್ಲಡೆ ಅದು ಸದ್ಯೋಜಾತಲಿಂಗದ ಕೂಟ.