Index   ವಚನ - 27    Search  
 
ನೀತಿಭಕ್ತಿ ಕ್ರಿಯಾಭಕ್ತಿ ಭಾವಭಕ್ತಿ ಸದ್ಭಾವಭಕ್ತಿ ಜ್ಞಾನಭಕ್ತಿ ಇಂತೀ ಭಕ್ತಿಯ ವಿವರ: ನೀತಿಭಕ್ತಿಗೆ ಸರ್ವಗುಣಪ್ರೀತಿವಂತನಾಗಿ, ಕ್ರಿಯಾಭಕ್ತಿಗೆ ಬಿಡುಮುಡಿ ಉಭಯವನರಿದು, ಭಾವಭಕ್ತಿಗೆ ಸಂಕಲ್ಪವಿಕಲ್ಪ ದೋಷವ ಕಂಡು, ಸದ್ಭಾವಭಕ್ತಿಗೆ ಮನ ವಚನ ಕಾಯ ತ್ರಿಕರಣವನರಿದು, ಜ್ಞಾನಭಕ್ತಿಗೆ ಜ್ಞಾತೃ ಜ್ಞಾನ ಜ್ಞೇಯ ಮುಂತಾದ ಮರ್ಕಟ ವಿಹಂಗ ಪಿಪೀಲಿಕ ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತೆರನ ತಿಳಿದು, ವಿಷ ಚರಣಾಂಗುಲದಲ್ಲಿ ವೇಧಿಸಿ, ಕಪಾಲದಲ್ಲಿ ನಿಂದು ಅಂಗ ಮೂರ್ಛೆಗೊಂಡಂತೆ, ಇಂತೀ ಭಕ್ತಿಸ್ಥಲದ ವಿವರ. ಹೆಚ್ಚು ಕುಂದನರಿದು ಕೊಡುವಲ್ಲಿ ಕೊಂಬಲ್ಲಿ ತಟ್ಟುವಲ್ಲಿ ಮುಟ್ಟುವಲ್ಲಿ,ತಾಗುವಲ್ಲಿ ಸೋಂಕುವಲ್ಲಿ ನಾನಾ ಗುಣಂಗಳಲ್ಲಿ ವಿವರವನರಿತು ವರ್ಮಜ್ಞನಾಗಿಪ್ಪ ಭಕ್ತನಂಗ, ಆ ಸುಖದ ಸಂಗ ಸದ್ಯೋಜಾತಲಿಂಗದ ನಿರಂಗ.