ಗೂಡಿನೊಳಗಿದ್ದು ಕಾಲ ವೇಳೆಯನರಿದು ಕೂಗುವ ಕುಕ್ಕುಟ
ತಾ ಸಾವುದ ಬಲ್ಲುದೆ?
ತನ್ನ ಶಿರವನರಿದು ಶಿರ ಬೇರೆ ಅಂಗ ಬೇರಾದಲ್ಲಿ,
ಆ ಅಂಗ ಪುಟನೆಗೆವಲ್ಲಿ ಆತ್ಮಸಂಗವೆಲ್ಲಿದ್ದಿತ್ತು?
ಶಿರಚ್ಛೇದವಾದಲ್ಲಿ ಮತ್ತಾವ ಘಟಕ್ಕೂ ಶಿರಬಂಧವಾಗಲಿಕ್ಕೆ
ಆ ಘಟ ಚೇತನವಡಗಿ ಅಲ್ಲಿಯೆ ಮೃತವಾಗಿಪ್ಪುದು.
ಇಂತೀ ಘಟ-ಆತ್ಮನ ಉಭಯದ ಭೇದವ ಬಲ್ಲಡೆ
ಪಿಂಡಜ್ಞಾನಸಂಬಂಧಿ, ಸದ್ಯೋಜಾತಲಿಂಗವ ಬಲ್ಲವ.