Index   ವಚನ - 47    Search  
 
ದಾಕ್ಷಿಣ್ಯದ ಭಕ್ತಿ, ಕಲಿಕೆಯ ವಿರಕ್ತಿ, ಮಾತಿನ ಮಾಲೆಯ ಬೋಧೆ, ತೂತ ಜ್ಞಾನಿಗಳ ಸಂಸರ್ಗ. ಬೀತಕುಂಭದಲ್ಲಿ ಅಮೃತವ ಹೊಯಿದಿರಿಸಲಿಕ್ಕೆ ಅದು ಎಷ್ಟು ದಿವಸ ಇರಲಾಪುದು? ಇಂತಿವ ಕಳೆದುಳಿದು ನಡೆನುಡಿ ಸಿದ್ಧಾಂತವಾಗಿ ಕೂಡಬೇಕು ಸದ್ಯೋಜಾತಲಿಂಗವ.