ಸಕಲಪದಾರ್ಥ ರಸದ್ರವ್ಯಂಗಳ
ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ
ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ
ತನ್ನಂಗವರಿದು ಲಿಂಗವ ಮುಟ್ಟಬೇಕು.
ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ
ಮೃದು ಸವಿಸಾರ ರುಚಿಗಳನರಿದು,
ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ
ಅರ್ಪಿತ ಇತ್ತಲೆ ಉಳಿಯಿತ್ತು.
ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು
ಅರ್ಪಿತದ ಭೇದವನರಿಯದೆ
ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು
ಮೊದಲಿಗೆ ಮೋಸ, ಲಾಭಕ್ಕಧೀನವುಂಟೆ?
ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ?
ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರು?
ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ.
ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ.
ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ
ಆತ್ಮ ಅನುಭವಿಸುವಂತೆ.ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ.
ಇಂತೀ ಉಭಯವನರಿಯಬೇಕು ಅರ್ಪಿಸಬೇಕು
ಸದ್ಯೋಜಾತಲಿಂಗದಲ್ಲಿ.
Art
Manuscript
Music
Courtesy:
Transliteration
Sakalapadārtha rasadravyaṅgaḷa
liṅgakkendu kalpisi arpisuvalli
mr̥du kaṭhiṇa madhura savisāraṅgaḷa ruci muntāduda
tannaṅgavaridu liṅgava muṭṭabēku.
Hāgallade tanna jihveyalli madhura
mr̥du savisāra rucigaḷanaridu,
ātmaliṅgakke arpitavendalli dr̥ṣṭaliṅgada
arpita ittale uḷiyittu.
Rūpu iṣṭaliṅgakkendu, ruci prāṇaliṅgakkendu
arpitada bhēdavanariyade
idiriṭṭu ubhayava tam'ma tāve kalpisikoṇḍuModalige mōsa, lābhakkadhīnavuṇṭe?
Svayambhu hēmakke oḷagu horaguṇṭe?
Eḍabaladalli ondakṣi naṣṭavādaḍe adāra kēḍembaru?
Biḍumuḍiyalli krīnaṣṭavādalli ariviṅge hīna.
Aridu ācarisadiddaḍe krīge oḍaleḍeyilla.
Ghaṭāṅgakke nōvu bandalli ā ghaṭagūḍiye
ātma anubhavisuvante.Intī iṣṭaprāṇavendu kaṭṭilla.
Intī ubhayavanariyabēku arpisabēku
sadyōjātaliṅgadalli.