ರಸದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು,
ಎನಬಹುದು, ಎನಬಾರದು.
ಗಂಧದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು,
ಎನಬಹುದು, ಎನಬಾರದು.
ರೂಪಿನಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು,
ಎನಬಹುದು, ಎನಬಾರದು.
ಶಬ್ದಂಗಳಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು,
ಎನಬಹುದು, ಎನಬಾರದು.
ಸ್ಪರ್ಶನದಲ್ಲಿ ಒಂದು ಲಿಂಗ ಅರ್ಪಿಸಿಕೊಂಬುದು
ಎನಬಹುದು, ಎನಬಾರದು.
ಇಂತೀ ಪಂಚೇಂದ್ರಿಯಂಗಳಲ್ಲಿ ಬಹುದು ಬಾರದು ಎಂಬ
ಉಭಯವನರಿದು ಅರ್ಪಿಸಬೇಕು, ಸದ್ಯೋಜಾತಲಿಂಗದಲ್ಲಿ.