Index   ವಚನ - 57    Search  
 
ಪೃಥ್ವೀತತ್ವಕ್ಕೆ ಅಪ್ಪುತತ್ವ ಸಂಘಟ್ಟವಾಗಿ ಆಕಾಶತತ್ವ ಬೆರಸಲಿಕ್ಕಾಗಿ ಘಟರೂಪ. ಆ ಘಟರೂಪಿನಲ್ಲಿ ವಾಯುತತ್ವ ಕೂಡಲಿಕ್ಕೆ ಆತ್ಮರೂಪು. ಈ ನಾಲ್ಕರ ಮಧ್ಯದಲ್ಲಿ ತೇಜತತ್ವ ರೂಪವಾಗಲಿಕ್ಕೆ ಪಂಚಭೂತಿಕ ಘಟವಾಯಿತ್ತು. ಕಠಿಣಭೇದವೆಲ್ಲವು ಪೃಥ್ವಿಯ ವಂಶಿಕ, ಸಾರಭೇದವೆಲ್ಲವು ಅಪ್ಪುವಿನ ವಂಶಿಕ, ಜ್ವಾಲೆ ವಂಶಿಕವೆಲ್ಲವು ತೇಜವಂಶಿಕ, ವಾಯು ವಂಶಿಕವೆಲ್ಲವು ಆತ್ಮವಂಶಿಕ, ನಾದವಂಶಿಕವೆಲ್ಲವು ಮಹದಾಕಾಶದ ಒಳಗು. ಇಂತೀ ಪಿಂಡಭೇದಂಗಳ ಹಲವು ತೆರನನರಿತು ಪಂಚೀಕರಣದ ನಾನಾ ಸಂಚುಗಳ ಸಂಧಿಸಿ ಮುಮುಕ್ಷುವಾಗಿ ಕೂಡಬೇಕು ಸದ್ಯೋಜಾತಲಿಂಗವ.