Index   ವಚನ - 59    Search  
 
ಪಿಂಡದ ಸರ್ವಾಂಗದಲ್ಲಿ ಆತ್ಮನು ವೇಧಿಸಿ ಇದ್ದಿಹಿತ್ತೆಂಬರು. ಕರ ಚರಣ ಕರ್ಣ ನಾಸಿಕ ನಯನ ಇವನರಿದು ಕಳೆದಲ್ಲಿ ಆತ್ಮ ಘಟದಲ್ಲಿದ್ದಿತ್ತು. ಶಿರಚ್ಛೇದನವಾದಲ್ಲಿ ಆತ್ಮ ಎಲ್ಲಿ ಅಡಗಿತ್ತು? ಇದನರಿತು ಆತ್ಮ ಪೂರ್ಣನೊ, ಪರಿಪೂರ್ಣನೊ ಎಂಬುದ ತಿಳಿದು ನಿಶ್ಚಯದಲ್ಲಿ ನಿಂದುದು ಪಿಂಡಜ್ಞಾನ ಸಂಬಂಧ. ಇದು ಸದ್ಯೋಜಾತಲಿಂಗವ ಕೂಡುವ ಕೂಟ.