Index   ವಚನ - 62    Search  
 
ಸ್ಥೂಲತನುವಿನಲ್ಲಿ ಸೂಕ್ಷ್ಮತನು ಆಧೀನವಾಗಿಪ್ಪುದನರಿದು ಸೂಕ್ಷ್ಮತನುವಿನಲ್ಲಿ ಕಾರಣತನು ಆಧೀನವಾಗಿಪ್ಪುದನರಿದು ಇರಬೇಕು ಎಂಬಲ್ಲಿ ಜಾಗ್ರದಲ್ಲಿ ಸ್ಥೂಲತನು ಕಂಡು, ಸೂಕ್ಷ್ಮತನುವಿಗೆ ಹೇಳಿತೆ ಸ್ವಪ್ನವ? ಆ ಸ್ವಪ್ನ ಕಾರಣತನುವಿನಲ್ಲಿ ಅಳಿಯಿತ್ತೆ ಕೂಡಿಕೊಂಡು? ಕಟ್ಟಿಗೆಯ ಹಿಡಿಯಬಹುದಲ್ಲದೆ ಕೆಂಡವ ಹಿಡಿಯಬಹುದೆ? ಕೆಂಡವ ಒಂದರಲ್ಲಿ ಬಂಧಿಸಿ ಹಿಡಿಯಬಹುದಲ್ಲದೆ ಉರಿಯ ಬಂಧಿಸಿ ಹಿಡಿಯಬಹುದೆ? ಆ ಉರಿ ಕೆಂಡದಲ್ಲಿ ಅಡಗಿ, ಕೆಂಡ ಕಾಷ್ಠದಲ್ಲಿ ಅಡಗಿ, ಆ ಕಾಷ್ಠ ಆ ಕೆಂಡ ಉರಿಯ ದೆಸೆ, ಆ ಉರಿ ಕಾಷ್ಠದ ದೆಸೆ. ಆ ಕಾಷ್ಠದಿಂದ ಕೆಂಡವಾಗಿ, ಆ ಕೆಂಡಕ್ಕೆ ಪ್ರತಿರೂಪಿನಿಂದ ಉರಿ ಪಲ್ಲಯಿಸುವಂತೆ ಇಂತೀ ಸ್ಥೂಲ ಸೂಕ್ಷ್ಮ ಕಾರಣ ತನುತ್ರಯದ ಭೇದ ಸದ್ಯೋಜಾತಲಿಂಗವನರಿವುದಕ್ಕೆ.