Index   ವಚನ - 64    Search  
 
ಪೃಥ್ವಿಯ ವಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಗುಣಗಂಭೀರದಲ್ಲಿ ಇದ್ದಿತೆಂಬರು. ಅಪ್ಪುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಾರಮಯವಾಗಿದ್ದಿತ್ತೆಂಬರು. ತೇಜದಂಶಿಕದಲ್ಲಿ ಆತ್ಮ ಬಂದಿರಲಿಕ್ಕಾಗಿ ಸರ್ವದೀಪ್ತವಾಗಿದ್ದಿತ್ತೆಂಬರು. ವಾಯುವಿನಂಶಿಕದಲ್ಲಿ ಆತ್ಮನು ಬಂದಿರಲಿಕ್ಕಾಗಿ ಸರ್ವಸಂಚಲಮಯವಾಗಿದ್ದಿತ್ತೆಂಬರು. ಆಕಾಶದಂಶದಲ್ಲಿ ಆತ್ಮನು ಬಂದಿರಲಿಕ್ಕಾಗಿ ಇಂತೀ ಐದು ಭೇದದಲ್ಲಿ ದಶವಾಯುವ ಕಲ್ಪಿಸಿಕೊಂಡು, ಹೆಸರ ರೂಹಿಟ್ಟು ಅಸುನಾಥನ ಒಡಗೂಡಬೇಕೆಂಬಲ್ಲಿ ಇದು ಸಂದಿಲ್ಲದ ಸಂಶಯ. ನಾನಾರು ಇದೇನೆಂಬುದು ಏಕೀಕರಿಸಿದಲ್ಲಿ ಸರ್ವೇಂದ್ರಿಯ ನಾಶನ, ಸದ್ಯೋಜಾತಲಿಂಗವನರಿವುದು ವಿನಾಶನ.