ಕಾಡೆಮ್ಮೆ ಊರಗೋಣನನೀದು,
ಆ ಊರಗೋಣಂಗೆ ಮೂರು ಬಾಯಿ, ಆರು ಕಾಲು,
ಕೊಂಬು ಎಂಟು, ಕಿವಿ ಹದಿನಾರು,
ನಾಲಗೆ ಇಪ್ಪತ್ತೈದು, ಬಾಲ ಮೂವತ್ತಾರು.
ನೂರರ ಬೆಂಬಳಿಯಲ್ಲಿ ನೋಡುವ ಕಣ್ಣು ಒಂದೆಯಾಯಿತ್ತು.
ಆ ಒಂದು ಕಣ್ಣು ಇಂಗಲಾಗಿ ಕೋಣಂಗೆ ಗ್ರಾಸವಿಲ್ಲದೆ
ಅದು ಅಲ್ಲಿಯೇ ಹೊಂದಿತ್ತು,
ಸದ್ಯೋಜಾತಲಿಂಗದಲ್ಲಿ ನಾಮನಷ್ಟವಾಯಿತ್ತು.