ಸಸಿಗೆ ನೀರೆರೆದಡೆ ಎಳಕುವುದಲ್ಲದೆ,
ನಷ್ಟಮೂಲಕ್ಕೆ ಹೊತ್ತು ನೀರ ಹೊಯಿದಡೆ
ಎಳಕುವುದೆ ಮಾರಯ್ಯಾ?
ನಿನ್ನ ವಿರಕ್ತಿ ನಷ್ಟವಾಗದ ಮುನ್ನವೆ
ಮಾರಯ್ಯಪ್ರಿಯ ಅಮರೇಶ್ವರಲಿಂಗವನರಿಯಿರಯ್ಯಾ.
Art
Manuscript
Music
Courtesy:
Transliteration
Sasige nīreredaḍe eḷakuvudallade,
naṣṭamūlakke hottu nīra hoyidaḍe
eḷakuvude mārayyā?
Ninna virakti naṣṭavāgada munnave
mārayyapriya amarēśvaraliṅgavanariyirayyā.