Index   ವಚನ - 52    Search  
 
ಪಂಚಾಮೃತವನುಂಡಡೇನು? ಮಲಮೂತ್ರ ವಿಷಯ ಘನವಕ್ಕು. ಭ್ರಾಂತು ಬೇಡ ಮರುಳೆ, ಬಿಡುವುದು ಕಾಯಗುಣವ. ಆಸೆ ಆಮಿಷ ತಾಮಸ ಅಶನ ವ್ಯಸನ ವಿಷಯಾದಿಗಳಲ್ಲಿ ಹಿರಿಯರು ಗರುವರುಂಟೆ? ಭ್ರಾಂತು ಬೇಡ ಮರುಳೆ, ಬಿಡುವುದು ಕಾಯಗುಣವ. ಈ ಭೇದವ ಭೇದಿಸ ಬಲ್ಲಡೆ ಕೂಡಲಚೆನ್ನಸಂಗನ ಶರಣ ಸಾಣೆಯಲ್ಲಿ ಸವೆದ ಶ್ರೀಗಂಧದಂತಿರಬೇಕು.