Index   ವಚನ - 1028    Search  
 
ಆವಲ್ಲಿ ಸರ್ವಪ್ರಪಂಚು ನಿವೃತ್ತಿಯಾಗಿಹುದು, ಅದೀಗ ಬ್ರಹ್ಮಜ್ಞಾನ. ಆವಲ್ಲಿ ಕೇವಲ ನಿಶ್ಚಿಂತವಾಗಿಹುದು, ಅದೀಗ ಬ್ರಹ್ಮಜ್ಞಾನ. ಆವಲ್ಲಿ ತಾವೆಂಬ ತೋರಿಕೆ ಹುಟ್ಟದಿಹುದು, ಅದೀಗ ಬ್ರಹ್ಮಜ್ಞಾನ. ಆವಲ್ಲಿ ಕೂಡಲಚೆನ್ನಸಂಗಯ್ಯನಲ್ಲದೆ ಪೆರತೊಂದನರಿಯದಿಹುದು ಅದೀಗ ಬ್ರಹ್ಮಜ್ಞಾನವಯ್ಯಾ.