ಉಚ್ಛಿಷ್ಟದ ಉದಕದೊಳಗೆ ಚಂದ್ರಮನ ನೆಳಲಿದ್ದಡೇನು,
ಅಲ್ಲಿ ಚಂದ್ರಮನಿದ್ದಾತನೆ?
ಸಂಸಾರದ ವ್ಯಾಪ್ತಿಯಲ್ಲಿ ಶರಣನ ಕಾಯವಿರ್ದಡೇನು,
ಅಲ್ಲಿ ಶರಣನಿದ್ದಾತನೆ?
ಕೆಸರೊಳಗಣ ತಾವರೆಯಂತೆ,
ಮರದೊಳಗಣ ಬಯಲಿನಂತೆ.
"ಮಮ ಸಾಹಿತ್ಯರೂಪೇಣ ತಮೋಮಾಯೇ ವಿವರ್ಜಯೇತ್|
ಮೇಘದುರ್ಮಲತೋಯಸ್ಥಂ ಕಮಲಪತ್ರಮಿವಾಚರೇತ್"|| ಇಂತೆಂದುದಾಗಿ,
ಇದ್ದೂ ಇರನು,
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಶರಣನು ಉಂಡುಪವಾಸಿ ಬಳಸಿ ಬ್ರಹ್ಮಚಾರಿ.