Index   ವಚನ - 1045    Search  
 
ಉಚ್ಚೆಯ ಬಚ್ಚಲ ಶೋಧಿಸುವವರಿಗೆ ಚಿಲುಮೆಯ ಆಯತವೇಕೊ? ಸತಿಯರ ನರಮಾಂಸವ ಭುಂಜಿಸುವವರಿಗೆ ಪರಪಾಕವರ್ಜಿತವೆಂದು ಸ್ವಯಂಪಾಕವೇಕೊ? ಅಷ್ಟೋತ್ತರಶತ ವೇದವ ಓದುವವರಿಗೆ ಅಚ್ಚಪ್ರಸಾದವೇಕೊ? ಇಂತೀ ತ್ರಿವಿಧ ಡಂಬಿನ ಭಕ್ತಿಗೆ ಊರ ಮುಂದಣ ಡೊಂಬನೆ ಸಾಕ್ಷಿ ಕೂಡಲಚೆನ್ನಸಂಗಮದೇವಾ