Index   ವಚನ - 1104    Search  
 
ಕಂಗಳ ತುರೀಯವ ಕರಸ್ಥಲ ನುಂಗಿ, ಕರಸ್ಥಲದ ದೃಷ್ಟವ ಕಂಗಳು ನುಂಗಿ, ಇಂತೀ ಉಭಯಕುಳವಳಿದು ಅದ್ವೈತವಾದ ಶರಣಂಗೆ ಆಹ್ವಾನವಿಲ್ಲ ವಿಸರ್ಜನವಿಲ್ಲ ಹಿಂದೆಂಬುದಿಲ್ಲ ಮುಂದೆಂಬುದಿಲ್ಲ; ಒಳಗೆಂಬುದಿಲ್ಲ, ಹೊರಗೆಂಬುದಿಲ್ಲ, ಕೀಳೆಂಬುದಿಲ್ಲ, ಮೇಲೆಂಬುದಿಲ್ಲ. ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣನೆತ್ತತ್ತ ನೋಡಿದಡತ್ತತ್ತ ನೀವೆ ಕಂಡಯ್ಯಾ.