Index   ವಚನ - 1112    Search  
 
ಕಂಥೆಯೊಳಗಣ ಕಪಟವ ಹರಿದಲ್ಲದೆ ಕಾಯ[ನಿರ್ವಂಚಕ]ನಲ್ಲ. ಕಪ್ಪರದೊಳಗಣ ಆಪ್ಯಾಯನವ ಹರಿದಲ್ಲದೆ ಜೀವ[ನಿರ್ಭಾವಕ]ನಲ್ಲ. ಕಣ್ಣಿನೊಳಗಣ ಕಾಳಿಕೆ ಹಿಂಗಿದಲ್ಲದೆ ಜ್ಞಾನಾನುಭಾವಿಯಲ್ಲ. ಕಾಯದೊಳಗಣ ಕಟ್ಟಿಗೆ ಮುರಿದು, ಮಾಯದೊಳಗಣ ಕಂಥೆಯ ಹರಿದು, ಮನದೊಳಗಣ ಕಪ್ಪರವನೊಡೆದು, ಸುಳಿದಾಡುವ ಕಣ್ಣ ಕಿತ್ತು, ನಿಶ್ಚಯ ನಿಜದಲ್ಲಿ ಚರಿಸುವ ಜ್ಞಾನಜಂಗಮಕ್ಕೆ` ನಮೋ ನಮೋ' ಎಂಬೆ ಕೂಡಲಚೆನ್ನಸಂಗಮದೇವಾ.