Index   ವಚನ - 10    Search  
 
ಪರುಷ ಲೋಹವ ಸೋಂಕಿದಲ್ಲಿ, ಆ ಗುಣವಳಿದು, ಹೇಮವಾಯಿತ್ತಲ್ಲದೆ, ಪುನರಪಿ ಶುದ್ಧಾತ್ಮವಾದುದಿಲ್ಲ. ಗುರು ಲಿಂಗವೆಂದು ಕೊಟ್ಟಡೆ ಅಂಗದಲ್ಲಿ ಬಂಧವಾಯಿತ್ತಲ್ಲದೆ, ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ. ಇಂತಿದು ಕಾರಣದಲ್ಲಿ, ಕೆಂಡದ ಮೇಲೆ ಕಟ್ಟಿಗೆಯ ಹಾಕಿದಡೆ ಪೊತ್ತುವುದಲ್ಲದೆ, ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ? ಇದು ಕಾರಣ, ಸಂಸಾರಪಾಶದಲ್ಲಿ ಬಿದ್ದ ಗುರು ಶಿಷ್ಯನ ಈಶಣತ್ರಯವ ಬಿಡಿಸಬಲ್ಲನೆ? ಇಂತೀ ಗುರುಸ್ಥಲನಿರ್ವಾಹಸಂಪಾದನೆ, ಸದ್ಯೋಜಾತಲಿಂಗಕ್ಕೆ.