Index   ವಚನ - 12    Search  
 
ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ? ವಿಶ್ವಾಸದಲ್ಲಿ ಪೂಜಿಸುವಾತಂಗೆ ಉತ್ತಮ ಕನಿಷ್ಠ ಮಧ್ಯಮವೆಂದು ಲಕ್ಷಿಸಲುಂಟೆ? ಮಾಹೇಶ್ವರ ಅರ್ಚನೆಯ ಮಾಡುವಲ್ಲಿ ಮಹಾದೇವ ತಪ್ಪದೆಯಿಪ್ಪ, ಇದು ಭಕ್ತಿವಿಶ್ವಾಸಸ್ಥಲ ಸದ್ಯೋಜಾತಲಿಂಗಕ್ಕೆ.