Index   ವಚನ - 18    Search  
 
ಭಕ್ತಿಯೆಂಬುದು ಅಪ್ರಮಾಣು ನೋಡಾ. ಭಕ್ತನಾದಡೆ ಸರ್ವಗುಣಸಂಪನ್ನನಾಗಿ ಕರ್ತೃ ಕಾಮಿಸಿದಲ್ಲಿ ಕಾಣದಂತಿರಬೇಕು. ಕರ್ತೃ ಕ್ರೋಧಿಸಿದಲ್ಲಿ ಎನ್ನ ನಲ್ಲ ಪರಾಧೀನವೆಂದಂತಿರಬೇಕು. ಕರ್ತೃ ಲೋಭಿಸಿದಲ್ಲಿ ತನ್ನ ಬೈಕೆಯ ತಾನೊಯ್ದನೆಂದರಿಯದಿರಬೇಕು. ಹೀಗಲ್ಲದೆ, ಇವ ತಾಳಲರಿಯದೆ ಮಾಡುವ ಮಾಟ ಆತ ಭಕ್ತನಲ್ಲ, ದಾತೃಸಂಬಂಧಿ. ಇದು ಕಾರಣ ಸದ್ಯೋಜಾತಲಿಂಗವನರಿದು ಮುಟ್ಟಬೇಕು.