ಇಂದ್ರಿಯಂಗಳಲ್ಲಿ ಲಿಂಗವು ಅರ್ಪಿತವ
ಸಂಧಿಸಿಕೊಂಡು ಉಂ[ಬು]ದೆಂಬ ತ್ರಿಭಂಗಿ ಗ್ರಹಿತವ ನೋಡಾ.
ಇಂದ್ರಿಯಂಗಳ ಮುಖದಲ್ಲಿ ಲಿಂಗವು ಬಂದು ಉಂಬಾಗ
ಇಂದ್ರಿಯವೆ ಲಿಂಗಕ್ಕೆ ಬೀಜವೆ?
ಅದು ಗರಿಗೋಲಿನ ಮೊನೆಯಂತೆ,
ಲಿಂಗದಿಂದ ಸರ್ವೇಂದ್ರಿಯ ನಿಶ್ಚಯ.
ಇದು ಲಿಂಗವ್ಯವಧಾನಿಯ ಅಂಗ,
ಸದ್ಯೋಜಾತಲಿಂಗದ ಸಂಗ.
Art
Manuscript
Music
Courtesy:
Transliteration
Indriyaṅgaḷalli liṅgavu arpitava
sandhisikoṇḍu uṁ[bu]demba tribhaṅgi grahitava nōḍā.
Indriyaṅgaḷa mukhadalli liṅgavu bandu umbāga
indriyave liṅgakke bījave?
Adu garigōlina moneyante,
liṅgadinda sarvēndriya niścaya.
Idu liṅgavyavadhāniya aṅga,
sadyōjātaliṅgada saṅga.