ಶಿಲೆಯ ಘಟಂಗಳಲ್ಲಿ ಪ್ರಜ್ವಲಿತದ ರ[ವಿ]
ಸ್ಥೂಲಕ್ಕೆ ಸ್ಥೂಲವಾಗಿ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ ಇಪ್ಪ ಭೇದದಂತೆ,
ಅರಿದು ಕೂಡುವ ಜ್ಞಾನದ ಸತ್ವ ಜಾತಿಕುಲವಾದಡೆ ಸಾಕು,
ವಿಜಾತಿಯ ಬೆರಸದೆ.
ಸತ್ವಕ್ಕೆ ತಕ್ಕ ಸಾಮರ್ಥ್ಯ ನಡೆ, ಸತ್ವಕ್ಕೆ ತಕ್ಕ ನುಡಿ,
ನುಡಿ ಸತ್ವಕ್ಕೆ ತಕ್ಕ ಜ್ಞಾನ, ಜ್ಞಾನಸತ್ವಕ್ಕೆ ತಕ್ಕ ಏಕೀಕರ.
ಇಂತೀ ಜ್ಞಾನೋದಯಭೇದ,
ಸದ್ಯೋಜಾತಲಿಂಗವ ಭೇದಿಸಿದ ಅಂಗ.
Art
Manuscript
Music
Courtesy:
Transliteration
Śileya ghaṭaṅgaḷalli prajvalitada ra[vi]
sthūlakke sthūlavāgi, sūkṣmakke sūkṣmavāgi ippa bhēdadante,
aridu kūḍuva jñānada satva jātikulavādaḍe sāku,
vijātiya berasade.
Satvakke takka sāmarthya naḍe, satvakke takka nuḍi,
nuḍi satvakke takka jñāna, jñānasatvakke takka ēkīkara.
Intī jñānōdayabhēda,
sadyōjātaliṅgava bhēdisida aṅga.