Index   ವಚನ - 37    Search  
 
ಧರಿತ್ರಿಯಲ್ಲಿ ಹರಿವ ಜಲ ತನಗೆ ಭೇದವಲ್ಲುದುದ ಭೇದಿಸಿ ಹರಿಯದಾಗಿ, ಮರ್ಕಟನ ಲಂಘನ ಚಿತ್ತಕ್ಕೆ ಎಟ್ಟದುದನೊಲ್ಲದಾಗಿ, ಮೆತ್ತದ ಹೇತುವಿನಲ್ಲಿದ್ದ ದಂಷ್ಟ್ರ ಚಿತ್ತವೆದ್ದ ಠಾವಿಗೆ ಜಂಘೆಯ ತೂಗಿ, ಜಡನಾದಡೆ ಚಿತ್ತವತ್ತ ಬಿಟ್ಟು ಇಪ್ಪುದರಿಂದ ಕಡೆಯ ನಿಮ್ಮ ವಿರಕ್ತಿ? ಇದು ಜ್ಞಾನಹೇಯಭಾವ, ಇದು ದೃಷ್ಟ ಸದ್ಯೋಜಾತಲಿಂಗವನರಿವುದಕ್ಕೆ.