ಹಲವು ಪಥದಿಂದ ಬಂದ ಜಲ
ನಿಲುವುದೊಂದು ಸ್ಥಾಯಿಯಾಗಿ,
ಕಟ್ಟು[ವಡೆ]ದಲ್ಲಿ ಒಂದೆ ದ್ವಾರದಿಂದ ಸೂಸಿ
ಹಲವು ಸ್ಥಲಂಗಳ ಬೆಳೆಗೆ ಹೊಲಬಾದುದಾಗಿ.
ಇಂತೀ ಗುಣದಲ್ಲಿ ನಾನಾ ವಿವರ:
ಇಂದ್ರಿಯಂಗಳನೊಂದುಗೂಡಿ, ಸತ್ಕ್ರೀಮಾರ್ಗಂಗಳೆಂಬ
ಘಟತಟಾಂಕಗಳಲ್ಲಿ ವಿಶ್ರಮಿಸಿ,
ಏಕಚಿತ್ತದಲ್ಲಿ ನಾನಾ ಸ್ಥಲಂಗಳನಾರೋಪಿಸಿ,
ವಿಶ್ವಸ್ಥಲಂಗಳಲ್ಲಿ ಪರಿಪೂರ್ಣವಾಗಿ,
ವಸ್ತುವನೊಡಗೂಡಿಪ್ಪುದು ಕ್ರಿಯಾಪಿಂಡ
ಜ್ಞಾನಪಿಂಡವಾದ ಭೇದ.
ಉಭಯಲೇಪವಾದಲ್ಲಿ ಪಿಂಡಜ್ಞಾನ,
ಜ್ಞಾನಲೇಪವಾದಲ್ಲಿ ಶಬ್ದಮುಗ್ಧ,
ಸದ್ಯೋಜಾತಲಿಂಗದಲ್ಲಿ ಐಕ್ಯಭಾವ.
Art
Manuscript
Music
Courtesy:
Transliteration
Halavu pathadinda banda jala
niluvudondu sthāyiyāgi,
kaṭṭu[vaḍe]dalli onde dvāradinda sūsi
halavu sthalaṅgaḷa beḷege holabādudāgi.
Intī guṇadalli nānā vivara:
Indriyaṅgaḷanondugūḍi, satkrīmārgaṅgaḷemba
ghaṭataṭāṅkagaḷalli viśramisi,
ēkacittadalli nānā sthalaṅgaḷanārōpisi,
viśvasthalaṅgaḷalli paripūrṇavāgi,
vastuvanoḍagūḍippudu kriyāpiṇḍa
jñānapiṇḍavāda bhēda.
Ubhayalēpavādalli piṇḍajñāna,
jñānalēpavādalli śabdamugdha,
sadyōjātaliṅgadalli aikyabhāva.