ಲಿಂಗವನರಿದು ಮುಟ್ಟಬೇಕೆಂಬಲ್ಲಿ
ಅರಿವುದು ಲಿಂಗಕ್ಕೆ ಹೊರಗೆ?
ಲಿಂಗದಿಂದ ಅರಿದ ಅರಿವು ತಾನಾಗಿ
ಬೇರೆ ದ್ವೈತವೆನಲಿಲ್ಲ, ಅದ್ವೈತವೆನಲಿಲ್ಲ.
ಅದು ತರುವಿನ ತಿಗುಡಿನ ಸಾರದಂತೆ,
ಆ ತರುವಿನ ಒಡಗೂಡಿಯೆ
ಸುಖದುಃಖವ ಅನುಭವಿಸುವಂತೆ,
ಅರಿದು ಅರ್ಪಿಸುವ ಕ್ರೀ ಸದ್ಯೋಜಾತಲಿಂಗದಲ್ಲಿ ಲೇಪ.
Art
Manuscript
Music
Courtesy:
Transliteration
Liṅgavanaridu muṭṭabēkemballi
arivudu liṅgakke horage?
Liṅgadinda arida arivu tānāgi
bēre dvaitavenalilla, advaitavenalilla.
Adu taruvina tiguḍina sāradante,
ā taruvina oḍagūḍiye
sukhaduḥkhava anubhavisuvante,
aridu arpisuva krī sadyōjātaliṅgadalli lēpa.