Index   ವಚನ - 55    Search  
 
ರಸದ ಸಾರ, ಗಂಧದ ಸುಗುಣ, ರೂಪಿನ ಚಿತ್ರ, ಶಬ್ದದ ಘೋಷ, ಸ್ವರ್ಶನದ ಮೃದು ಕಠಿಣಂಗಳ ಅರಿದರ್ಪಿಸಬೇಕು. ಅರಿದರ್ಪಿಸುವುದಕ್ಕೆ ಸಂದೇಹವ ಗಂಟನಿಕ್ಕಿ ಒಂದೊಂದೆಡೆಯ ಅರಿದೆಹೆನೆಂದಡೆ, ಭಿತ್ತಿ ಮೂರು, ಲಕ್ಷಣವೈದು, ಮಾರ್ಗವಾರು,ವಿಭೇದ ಮೂವತ್ತಾರು, ತತ್ವವಿಪ್ಪತ್ತೈದು,ಸ್ಥಲನೂರೊಂದರಲ್ಲಿ ಹೊರಳಿ ಮರಳಿ ಮತ್ತೊಂದರಲ್ಲಿಯೆ ಕೂಡುವುದಾಗಿ ಒಂದೆ ಎಂದು ಸಂದೇಹವ ಬಿಟ್ಟಲ್ಲಿ, ಉತ್ತರಾಂಗಿಯ ಅರ್ಪಿತ. ಉಭಯವೆಂದಲ್ಲಿ ಪೂರ್ವಾಂಗಿಯ ಉಭಯದೃಷ್ಟ ಇವು ಅಲಕ್ಷ್ಯವಾದಲ್ಲಿ ಸದ್ಯೋಜಾತಲಿಂಗವಿಪ್ಪ ಭೇದ.