ದ್ವೈತವೆಂದಡೆ ತಾನಿದಿರು ಎಂಬುದು ಎರಡುಂಟಾದುದು.
ಅದ್ವೈತವೆಂದಡೆ ಕಾಣಬಾರದುದ
ಕಂಡೆಹೆನೆಂಬುದು.
ಇಂತು ದ್ವೈತ ಅದ್ವೈತಂಗಳಿಂದ ಕಂಡೆ ಕಾಣಿಸಿಕೊಳ್ಳೆನೆಂಬ ಬಂಧವಿಲ್ಲದೆ
ನಿಜಸಂಗವೆಂಬುದು ತಲೆದೋರದೆ,
ಉರಿಕೊಂಡ ಕರ್ಪುರದ ಗಂಧದಂತೆ
ಅಲ್ಲಿಯೆ ಸ್ಥಲಲೇಪ ಲೋಪ,
ಸದ್ಯೋಜಾತಲಿಂಗ ಬಟ್ಟಬಯಲು.
Art
Manuscript
Music
Courtesy:
Transliteration
Dvaitavendaḍe tānidiru embudu eraḍuṇṭādudu.
Advaitavendaḍe kāṇabāraduda
kaṇḍ'̔ehenembudu.
Intu dvaita advaitaṅgaḷinda kaṇḍe kāṇisikoḷḷenemba bandhavillade
nijasaṅgavembudu taledōrade,
urikoṇḍa karpurada gandhadante
alliye sthalalēpa lōpa,
sadyōjātaliṅga baṭṭabayalu.