ಕೋ ಬಾ ಎಂದಲ್ಲಿ ಆತ್ಮನ ಭೇದ,
ಅಂಬಾ ಎಂದಲ್ಲಿ ಅರಿವಿನ ಭೇದ,
ಧಾ ಎಂದು ನಕ್ಕಿರಿದಲ್ಲಿ ಚಿದಾತ್ಮನ ಭೇದ.
ಇಂತೀ ಗುಣದ ಪಶು ಅಸುವಿನ
ಬಲೆಯ ಕಾಯ್ದೊಪ್ಪಿಸಬೇಕು,
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
Transliteration Kō bā endalli ātmana bhēda,
ambā endalli arivina bhēda,
dhā endu nakkiridalli cidātmana bhēda.
Intī guṇada paśu asuvina
baleya kāydoppisabēku,
gōpatinātha viśvēśvaraliṅgakke.