ಅಂತರವಿಲ್ಲದಂದು, ಬಾಹ್ಯವಿಲ್ಲದಂದು,
ಅಡಿ, ಮುಡಿ, ಒಡಲು, ಮತ್ತೊಂದೆಡೆಯೇನೂ ಇಲ್ಲದಂದು,
ದಶದಿಕ್ಕುಗಳು ವಿಶ್ವಪ್ರಪಂಚುಯೇನೂ ಇಲ್ಲದಂದು,
ಸ್ಥಾವರ ಜಂಗಮಾತ್ಮಕಂಗಳಿಗೆ ಆಧಾರ ಕರ್ತೃವೆಂಬ
ನಾಮಂಗಳೇನೂ ಇಲ್ಲದಂದು,
ಸರ್ವಶೂನ್ಯ ನಿರಾಲಂಬವಾಗಿರ್ದೆಯಲ್ಲಾ ನೀನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Antaravilladandu, bāhyavilladandu,
aḍi, muḍi, oḍalu, mattondeḍeyēnū illadandu,
daśadikkugaḷu viśvaprapan̄cuyēnū illadandu,
sthāvara jaṅgamātmakaṅgaḷige ādhāra kartr̥vemba
nāmaṅgaḷēnū illadandu,
sarvaśūn'ya nirālambavāgirdeyallā nīnu,
mahāliṅgaguru śivasid'dhēśvara prabhuvē.