ದ್ವೈತಿಯಲ್ಲ ಅದ್ವೈತಿಯಲ್ಲ ಕಾಣಿಭೋ ಶರಣ.
ದ್ವೈತಾದ್ವೈತವೆಂಬ ಉಭಯ ಕಲ್ಪನೆಯನಳಿದುಳಿದ
ವೀರಮಾಹೇಶ್ವರನು ಪರಶಿವನ ನಿರುತ ಸ್ವಯಾನಂದಸುಖಿ.
ಪರಶಿವನ ಪರಮ ತೇಜದಾದಿ ಬೀಜ.
ಪರಶಿವನ ಪರಮಜ್ಞಾನಪ್ರಕಾಶಮಯ ಪರಮಾನಂದದ,
ನಿರುಪಮಲಿಂಗದ ಪ್ರಭಾಕಿರಣವೇ ತಾನಾದ ಶರಣನಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Dvaitiyalla advaitiyalla kāṇibhō śaraṇa.
Dvaitādvaitavemba ubhaya kalpaneyanaḷiduḷida
vīramāhēśvaranu paraśivana niruta svayānandasukhi.
Paraśivana parama tējadādi bīja.
Paraśivana paramajñānaprakāśamaya paramānandada,
nirupamaliṅgada prabhākiraṇavē tānāda śaraṇanayya,
mahāliṅgaguru śivasid'dhēśvara prabhuvē.