•  
  •  
  •  
  •  
Index   ವಚನ - 234    Search  
 
ಪರುಷ ಸೋಂಕಲು ಅವಲೋಕದ ಗುಣ ಕೆಟ್ಟು ಚಿನ್ನವಾಗದಿಹುದೆ? ಹಲವು ತೃಣಂಗಳೆಲ್ಲವು ಅಗ್ನಿಯ ಮುಟ್ಟಲು ಭಸ್ಮವಾಗದಿಹವೆ? ಹಳ್ಳಕೊಳ್ಳದ ನೀರೆಲ್ಲಾ ಬಂದು ಅಂಬುಧಿಯನೆಯ್ದಿ ಅಂಬುಧಿಯಪ್ಪುದು ತಪ್ಪದು ನೋಡಾ! ಹಲವು ವರ್ಣದ ಪದಾರ್ಥವನೆಲ್ಲವ ತಂದು ಶಿವಲಿಂಗಾರ್ಪಣವ ಮಾಡಲು ಆ ಪದಾರ್ಥದ ಪೂರ್ವಾಶ್ರಯವಳಿದು ಪ್ರಸಾದವಪ್ಪುದು ತಪ್ಪದು ನೋಡಾ! ಆ ಪ್ರಸಾದವ ಕೊಂಬ ಪ್ರಸಾದಿ ಪವಿತ್ರಕಾಯನು ನೋಡಾ! ಆತನು ಶುದ್ಧ ನಿರ್ಮಲನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Paruṣa sōṅkalu avalōkada guṇa keṭṭu cinnavāgadihude? Halavu tr̥ṇaṅgaḷellavu agniya muṭṭalu bhasmavāgadihave? Haḷḷakoḷḷada nīrellā bandu ambudhiyaneydi ambudhiyappudu tappadu nōḍā! Halavu varṇada padārthavanellava tandu śivaliṅgārpaṇava māḍalu ā padārthada pūrvāśrayavaḷidu prasādavappudu tappadu nōḍā! Ā prasādava komba prasādi pavitrakāyanu nōḍā! Ātanu śud'dha nirmalanu nōḍā, mahāliṅgaguru śivasid'dhēśvara prabhuvē.