ಈ ಲೋಕದಲ್ಲಿ ಸತ್ಕ್ರಿಯನೆ ಪ್ರತಿಷ್ಠೆಯ ಮಾಡುತ್ತಿಪ್ಪರು.
ಗೋವಿನ ದೇಹದಲ್ಲಿ ಘೃತವಿಪ್ಪುದು.
ಆ ಗೋವಿಂಗೆ ಪುಷ್ಟಿಯಾಗಲರಿಯದು.
ಆ ಗೋವ ಪೋಷಿಸಿ ಹಾಲ ಕರೆದು ಕಾಸಿ ಹೆಪ್ಪನಿಕ್ಕಿ
ಆ ದಧಿಯ ಮಥನವ ಮಾಡಿ ಬೆಣ್ಣೆಯ ತೆಗೆದು
ಆ ನವನೀತವ ತುಪ್ಪವ ಕಾಸಿ ಆ ಗೋವಿಂಗೆ ಕುಡಿಸಲಾಗಿ
ದಿನದಿನಕ್ಕೆ ಪುಷ್ಟಿಯಪ್ಪುದು ತಪ್ಪದಯ್ಯ.
ಈ ಪ್ರಕಾರದಲ್ಲಿ ಲಿಂಗೋಪಚಾರವ ಮಾಡಲಾಗಿ ಜ್ಞಾನವಹುದು.
ಜ್ಞಾನವಾಗಲಿಕೆ ಸಮ್ಯಜ್ಞಾನವಹುದು.
ಸಮ್ಯಜ್ಞಾನವಾಗಲಾಗಿ ಪ್ರಾಣವೆ ಲಿಂಗವಪ್ಪುದು ತಪ್ಪದು.
ಸಂದೇಹವಿಲ್ಲವಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ī lōkadalli satkriyane pratiṣṭheya māḍuttipparu.
Gōvina dēhadalli ghr̥tavippudu.
Ā gōviṅge puṣṭiyāgalariyadu.
Ā gōva pōṣisi hāla karedu kāsi heppanikki
ā dadhiya mathanava māḍi beṇṇeya tegedu
ā navanītava tuppava kāsi ā gōviṅge kuḍisalāgi
dinadinakke puṣṭiyappudu tappadayya.
Ī prakāradalli liṅgōpacārava māḍalāgi jñānavahudu.
Jñānavāgalike samyajñānavahudu.
Samyajñānavāgalāgi prāṇave liṅgavappudu tappadu.
Sandēhavillavayya,
mahāliṅgaguru śivasid'dhēśvara prabhuvē.