ಜಂಗಮಕ್ಕೊಂದನಿಕ್ಕಿ ತಾನೊಂದನುಂಬನೆ ಪ್ರಸಾದಿ?
ಜಂಗಮ ಉಂಡರೆ ಮನದಲ್ಲಿ ಮರುಗುವನೆ ಪ್ರಸಾದಿ?
ಜಂಗಮಕ್ಕೆ ತಳಿಗಳ ತಳಿದು
ತಾ ಗಂಗಳ ತುಂಬಿ ಒಟ್ಟಿಸಿಕೊಂಡು ಕೊಂಬನೆ ಪ್ರಸಾದಿ?
ಪ್ರಸಾದಿಯಂತೆ ಪ್ರಪಂಚುಂಟೆ?
ಕಕ್ಕುಲತೆಯ ಮಾಡಿಕೊಂಡನಾದರೆ
ನಾಯಮಾಂಸ ತಿಂದ ಸಮಾನ ಕಾಣಿರೊ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Jaṅgamakkondanikki tānondanumbane prasādi?
Jaṅgama uṇḍare manadalli maruguvane prasādi?
Jaṅgamakke taḷigaḷa taḷidu
tā gaṅgaḷa tumbi oṭṭisikoṇḍu kombane prasādi?
Prasādiyante prapan̄cuṇṭe?
Kakkulateya māḍikoṇḍanādare
nāyamānsa tinda samāna kāṇiro,
mahāliṅgaguru śivasid'dhēśvara prabhuvē.