ಆರೆಂಬ ಸಂಖ್ಯೆ ಆರೂ ಇಲ್ಲದ
ರಾಜ್ಯದಿ ಮಾರಾರಿಯೊಬ್ಬನೇ ಅರಸು ನೋಡಾ.
ಅರಸು ಪ್ರಧಾನಿ ಮಂತ್ರಿ ಆನೆ ಸೇನೆ
ಪ್ರಜೆ ಪರಿವಾರವೆಲ್ಲವು ಸತ್ತು
ಅರಸಿನ ಅರಸುತನ ಕೆಟ್ಟಿತ್ತು ನೋಡಾ.
ತನ್ನಿಂದನ್ಯವಾಗಿ ಇನ್ನಾರೂ ಆರೂ ಏನುಯೇನೂ ಇಲ್ಲದ
ನಿರಾಕಾರವ ನೆರೆದು
ಆ ನಿರಾಕಾರ ಪರವಸ್ತುವೆಯಾದನಾಗಿ,
ಅದು ಲಿಂಗಾಂಗ ಸಂಯೋಗ ಕಾಣಾ,
ಮಹಾಲಿಂಗುಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Āremba saṅkhye ārū illada
rājyadi mārāriyobbanē arasu nōḍā.
Arasu pradhāni mantri āne sēne
praje parivāravellavu sattu
arasina arasutana keṭṭittu nōḍā.
Tannindan'yavāgi innārū ārū ēnuyēnū illada
nirākārava neredu
ā nirākāra paravastuveyādanāgi,
adu liṅgāṅga sanyōga kāṇā,
mahāliṅguguru śivasid'dhēśvara prabhuvē.