ನೋಡಿಹೆನೆಂದರೆ ನೋಟ ಸಮರಸವಾಯಿತ್ತು.
ಕೂಡಿಹೆನೆಂದರೆ ಕೂಟ ನಿಬ್ಬೆರಗಾಯಿತ್ತಯ್ಯ.
ನೋಟ ಕೂಟಗಳೆಂಬುಭಯವಳಿದು,
ನಿಜದಲ್ಲಿ ನಿರ್ವಯಲಾಯಿತ್ತಯ್ಯ.
ನೋಡಲಿಲ್ಲದ ನುಡಿಸಲಿಲ್ಲದ ಕೂಡಿಲಿಲ್ಲದಪ್ರತಿಮ ತಾನು ತಾನಾದ
ಪರಮಾನಂದ ಸುಖದಲ್ಲಿ ಓಲಾಡುತ್ತಿರ್ದೆನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Nōḍ'̔ihenendare nōṭa samarasavāyittu.
Kūḍ'̔ihenendare kūṭa nibberagāyittayya.
Nōṭa kūṭagaḷembubhayavaḷidu,
nijadalli nirvayalāyittayya.
Nōḍalillada nuḍisalillada kūḍililladapratima tānu tānāda
paramānanda sukhadalli ōlāḍuttirdenayyā,
mahāliṅgaguru śivasid'dhēśvara prabhuvē.