ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು,
ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ.
ಅಗ್ನಿಯಂಗದ ಉದರದೊಳಗೆ ಪರಿಪರಿಯ ರಸದ ಭಾವಿ.
ಆ ರಸದ ಭಾವಿಯ ತುಳಕ ಹೋದವರೆಲ್ಲ
ಅಗ್ನಿಯನುಣ್ಣದೆ, ಆ ರಸವನೆ ಉಂಡು,
ಅಗ್ನಿಯ ಸ್ವರೂಪವಾದರು ನೋಡಾ.
ಅಗ್ನಿಯ ಸ್ವರೂಪಾದುದ ಕಂಡು ಕುರುಹಳಿದು ಅರುಹಡಗಿ
ನಿರವಯಲಸಮಾಧಿಯಲ್ಲಿ ನಿಂದ ನಿಬ್ಬೆರಗು
ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Aṅgavillada niraṅgige agniya baḷagada avayavaṅgaḷu,
brahmakapālavē śiras'sāgippudu nōḍā.
Agniyaṅgada udaradoḷage paripariya rasada bhāvi.
Ā rasada bhāviya tuḷaka hōdavarella
agniyanuṇṇade, ā rasavane uṇḍu,
agniya svarūpavādaru nōḍā.
Agniya svarūpāduda kaṇḍu kuruhaḷidu aruhaḍagi
niravayalasamādhiyalli ninda nibberagu
mr̥ta gamana rahitanu nōḍā liṅgaikyanu,
mahāliṅgaguru śivasid'dhēśvara prabhuvē.