•  
  •  
  •  
  •  
Index   ವಚನ - 62    Search  
 
ಬೇರಿನ ಬಣ್ಣ ನೋಡ ನೋಡಲಿಕ್ಕೆ ಹಬೆಗೆ ಹಾರುವ ತೆರದಂತೆ ಪಂಕದ ಸಾರ ಕಿರಣಕ್ಕೆ ಏವಂಕದಲ್ಲಿಯೆ ಅಡಗಿದಂತೆ ಈ ಘಟ ಸಂಕೇತದಲ್ಲಿದ್ದ ಆತ್ಮನು ಆ ಗುಣ ಏವಂಕದಲ್ಲಿಯೆ ಅಡಗಿದ ಮತ್ತೆ ಠವಣೆಗೆ ಸಂದುಂಟೆ? ಇದು ಅಂಗಲಿಂಗ ಸಂಬಂಧ, ಲಿಂಗಾಂಗ ಸಂಯೋಗ. ಶಂಭುವಿನಿಂದತ್ತ ಸ್ವಯಂಭುವಿನಿಂದಿತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
Transliteration Bērina baṇṇa nōḍa nōḍalikke habege hāruva teradante paṅkada sāra kiraṇakke ēvaṅkadalliye aḍagidante ī ghaṭa saṅkētadallidda ātmanu ā guṇa ēvaṅkadalliye aḍagida matte ṭhavaṇege sanduṇṭe? Idu aṅgaliṅga sambandha, liṅgāṅga sanyōga. Śambhuvinindatta svayambhuvininditta atibaḷa nōḍā, mātuḷaṅga madhukēśvaranu.