•  
  •  
  •  
  •  
Index   ವಚನ - 12    Search  
 
ನಡೆನುಡಿಯಿಂದಾವರಿಸಿಕೊಂಡು ಒಂದಾನೊಂದು ದಿನದಲ್ಲಿ ಮನಾನಂದವಾಗಿ ಕೂಗುತಿರ್ಪುದೆ ಮನಮೀಸಲು. ಹೊನ್ನು ಮನ ಮೇರೆ ತಪ್ಪಿದ ಬಳಿಕ ಇನ್ನು ತಿಳಿತಿಳಿದು ಮನವೊಲಿದು ನೀನೆಂಬುದೆ ಧರ್ಮಾರ್ಥ. ನ್ಯಾಯಯುತವಯ್ಯಾ ಪರಮಶ್ರೀ ಗುರುರಾಯ ನಿಜಗುರು ನಿರಾಲಂಬಪ್ರಭುವೆ. ಮತ್ತಂ ನೀನೆಂಬುದೆ ಭಕ್ತಿಜ್ಞಾನವೆಂದ ವಿವರವು || ವಚನ ||
Transliteration Naḍenuḍiyindāvarisikoṇḍu ondānondu dinadalli manānandavāgi kūgutirpude manamīsalu. Honnu mana mēre tappida baḷika innu tiḷitiḷidu manavolidu nīnembude dharmārtha. N'yāyayutavayyā paramaśrī gururāya nijaguru nirālambaprabhuve. Mattaṁ nīnembude bhaktijñānavenda vivaravu || vacana ||