ಅಂಡದಲ್ಲಿಯೊಂದು ಆಕಾರದ ರೂಪು ಹುಟ್ಟಿತ್ತು.
ಆ ಆಕಾರದ ರೂಪಿನಲ್ಲಿ
ಅನುವಿನ ಮೂರ್ತಿಯ ಭಕ್ತಿ ಹುಟ್ಟಿತ್ತು.
ಆ ಭಕ್ತಿಯ ಸುಖ ವಿಸುಖವಾಗಿ ತೋರಿತ್ತು.
ವಿಸುಖ ವಿತೃಪ್ತಿಯ ಕಂಡು ತಲೆದೋರಿತ್ತು.
ಮೂರ್ತಿಯ ಮೂರ್ತಿಯ ಮುಖವರಳಿ ಸುಖದಲ್ಲಿ
ನಿರ್ವಯಲಾಯಿತ್ತಯ್ಯ ಸಂಗಯ್ಯ.
Transliteration Aṇḍadalliyondu ākārada rūpu huṭṭittu.
Ā ākārada rūpinalli
anuvina mūrtiya bhakti huṭṭittu.
Ā bhaktiya sukha visukhavāgi tōrittu.
Visukha vitr̥ptiya kaṇḍu taledōrittu.
Mūrtiya mūrtiya mukhavaraḷi sukhadalli
nirvayalāyittayya saṅgayya.