ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡು ಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನಿಂತಪ್ಪ ಮಹಿಮನಯ್ಯಾ ಬಸವಯ್ಯಾ.
Transliteration Aṭṭaḍaviyalli biṭṭuhōdiri basavayyā.
Naṭṭanaḍu grāmava keḍisihōdiri basavayyā.
Huṭṭillada ban̄jege makkaḷakoṭṭiri basavayyā.
Ā makkaḷa phalavilladante māḍidiri basavayyā.
Saṅgayyanalli nīnintappa mahimanayyā basavayyā.