ಅಡವಿಯ ಹುಯ್ಯಲು ಎನ್ನ ಮೇಲುವರಿಯಿತ್ತು.
ಎನ್ನ ಮೇಲುವರಿವ ಹುಯ್ಯಲ ಬೆಳಸಿ ನಾನು,
ನಿಜಪ್ರಸಂಗಿಯಾದೆನಯ್ಯ.
ನಿತ್ಯವ ಹಡದು ನಿಃಶೂನ್ಯದ ಮಂಟಪದಲ್ಲಿ
ನಿರಾಲಂಬಿಯಾನಾದೆನಯ್ಯ ಸಂಗಯ್ಯ.
Transliteration Aḍaviya huyyalu enna mēluvariyittu.
Enna mēluvariva huyyala beḷasi nānu,
nijaprasaṅgiyādenayya.
Nityava haḍadu niḥśūn'yada maṇṭapadalli
nirālambiyānādenayya saṅgayya.